##
ಆಲಿಂಗಿಸು ನೀನೊಮ್ಮೆ ನನ್ನನೂ…
ಅವಕಾಶ ಸಿಗದಿನ್ನೆಂದಿಗೂ…
ಆಲಿಂಗಿಸು ನೀನೊಮ್ಮೆ ನನ್ನನೂ…
ಅವಕಾಶ ಸಿಗದಿನ್ನೆಂದಿಗೂ…
ನಮಗಿಂದು ದೊರೆತ ಈ ಸಮಯ,
ಅದೃಷ್ಟದಾಟವಲ್ಲವೇನು…
ಮನಸಾರೆ ನೋಡಿ ನನ್ನನು,
ಕಣ್ತುಂಬಿಕೊ ನೀನು…
ಹತ್ತಿರ ಕರೆದು ಒಮ್ಮೆ ನನ್ನನು,
ಹೃದಯದಲಿ ಇರಿಸಿಕೊ…
ಹೇಳಲಾಗದ ಮಾತುಗಳನೆಲ್ಲ,
ಮೌನದಲಿ ಕೇಳಿಸಿಕೊ…
ಕಣ್ಣಂಚಿನ ಭಾವನೆಗಳನು,
ಕಣ್ಣಲ್ಲೇ ಓದಿಕೊ…
ಈ ಕ್ಷಣವೇ ಕೊನೆಯಾದರೂ,
ನೆನಪಾಗಿ ಉಳಿಸಿಕೊ…
ನಿನ್ನ ಒಲವಿನ ಅಪ್ಪುಗೆಯಲಿ,
ನನ್ನ ನೋವನು ಕರಗಿಸಿಕೊ…
ಮತ್ತೊಮ್ಮೆ ಬರುವುದೇ ಬಾಳಲಿ,
ನಿನ್ನ ಜೊತೆಯಲಿ ಈ ಕ್ಷಣ…
ಮತ್ತೆ ಇಂಥ ಭಾಗ್ಯವು,
ಸಿಗುವುದೇ ನಮಗಿನ್ನೊಮ್ಮೆ…?
ಕಾಲದಾಟದ ದಾರಿಯಲಿ,
ದೂರವಾದರೂ ಸರಿಯೇ…
ಈಗ ಸಿಕ್ಕಿರುವ ಕ್ಷಣವನು,
ನಮ್ಮದಾಗಿಸಿಕೊಳ್ಳೋಣವೇ…
ಆಲಿಂಗಿಸು ನೀನೊಮ್ಮೆ ನನ್ನನೂ…
ಅವಕಾಶ ಸಿಗದಿನ್ನೆಂದಿಗೂ…
ಆಲಿಂಗಿಸು ನೀನೊಮ್ಮೆ ನನ್ನನೂ…
ಈ ಅವಕಾಶ ಸಿಗದಿನ್ನೆಂದಿಗೂ…
,