ದೇವರೇ ಕ್ರೂರ
ವಿಧಿಯೇ ಘೋರ
ಕಾಲವೇ ಕಂಟಕದ ದಾರ
ತಿಳಿಯೋ ಇದುವೇ ಜೀವನದ ಸಾರ
ಜೀವನದ ಸೂತ್ರವೆ
ಹರಿದು ದಿಕ್ಕು ತಪ್ಪಿಸಿದೆ
ನನ್ನ ಭವಿಷ್ಯಕ್ಕೆ ಗ್ರಹಣ
ಬಡಿದು ಕತ್ತಲೆ ಕವಿದಿದೆ
ಕಾಲದ ಕಾಲಡಿಯೆ ಸಿಲುಕಿ
ಮುಂದಿನ ದಾರಿಯೇ ದೊಚದಂತಾಗಿದೆ.
ವಿಧಿಯಾಟವು ಶುರುವಾಯಿತೆ
ಪರಿಸ್ಥಿತಿಯು ನನ್ನ ಕೈ ಜಾರಿತೆ
ನಿನ್ನ ನಂಬಿ ನನ್ನ ಜೀವನ ಮಲೀನವಾಗಿತೆ
ನನ್ನ ಬಾಳಲ್ಲಿ ಬರೀ ನೋವೇ ತುಂಬಿದೆಯೇ
ವಿಧಿಯೇ .......ವಿಧಿಯೇ....ವಿಧಿಯೇ....
ದೇವರೇ ಕ್ರೂರ
ವಿಧಿಯೇ ಘೋರ
ಕಾಲವೇ ಕಂಟಕದ ದಾರ
ತಿಳಿಯೋ ಇದುವೇ ಜೀವನದ ಸಾರ
ಜೀವನದ ಸೂತ್ರವೆ
ಹರಿದು ದಿಕ್ಕು ತಪ್ಪಿಸಿದೆ
ನನ್ನ ಭವಿಷ್ಯಕ್ಕೆ ಗ್ರಹಣ
ಬಡಿದು ಕತ್ತಲೆ ಕವಿದಿದೆ
ಕಾಲದ ಕಾಲಡಿಯೆ ಸಿಲುಕಿ
ಮುಂದಿನ ದಾರಿಯೇ ದೊಚದಂತಾಗಿದೆ.
ನ್ಯಾಯಕ್ಕೆ ನೀರಿಲ್ಲ
ಸತ್ಯಕ್ಕೆ ಗೆಲುವಿಲ್ಲ
ಸುಳ್ಳಿನ ಈ ಪರಪಂಚದಲ್ಲಿ.
ಹೇಗೆ ಬಾಳೋದು ದೇವರೇ ನಾವಿಲ್ಲಿ
ಸತ್ಯ ಅನ್ನೋದು ಕೆಂಡ
ಮುಚ್ಚಿರೋ ಬೂದಿ ತರ
ಆ ಕ್ಷಣಕ್ಕೆ ಮಾತ್ರ ಕಾಣಲ್ಲ
ಸತ್ಯ ಅನ್ನೋದು ಎದ್ದು ನಿಂತರೆ
ಸುಳ್ಳು ಅನ್ನೋದು ಅಡ್ರೆಸ್ಕಿರಲ್ಲ
ಗಾಳಿಗೆ ಸಿಕ್ಕಿ ತೋರಿ ಹೋಗಿ ಬಿಡುತ್ತೆ..
ಸತ್ಯ ಬಂದೇರಿ ನಿಲ್ಲೋದು ಕೊನೆಗೆ...
ದೇವರೇ ಕ್ರೂರ
ವಿಧಿಯೇ ಘೋರ
ಕಾಲವೇ ಕಂಟಕದ ದಾರ
ತಿಳಿಯೋ ಇದುವೇ ಜೀವನದ ಸಾರ
ಸಾಹಿತ್ಯ ರಚನೆ
ಪ್ರಸನ್ನಕುಮಾರ್ Tumkur