ಪ್ರಕೃತಿ ಹಸಿರಿಗೆ
ಮಾನವನ ಉಸಿರಿಗೆ
ಕಾರಣಳು ಹೆಣ್ಣು
ಪ್ರೀತಿಸು ಜೀವ
ಭೂಮಿಯ ದೈವ
ಹೆಣ್ಣು ಜಗದ ಕಣ್ಣು
ತಾಯಿಯ ರೂಪ
ದೈವ ಸ್ವರೂಪ
ಮನೆ ಬೆಳಗುವ ದೀಪ
ಹೆಣ್ಣು,ಹೆಣ್ಣು ಜಗದ ಕಣ್ಣು
ಯೋಚಿಸು ಆಲೋಚಿಸು
ಹೆಣ್ಣಿನ ಬಗೆಯ
. ಪ್ರೀತಿಸು ಪೂಜಿಸು
ತಾಯಿ ದೇವಿಯ
ಸಹನೆಯ ಮೂರುತಿ
ದೇಶದ ಕೀರುತಿ
ಹೆಣ್ಣು,ಹೆಣ್ಣು ಜಗದ ಕಣ್ಣು
ಕೈಮುಗಿದು ಪೂಜಿಸು
ನೋಡೋ ದೃಷ್ಟಿ ಬದಲಿಸು
ಹೆಣ್ಣು ಅಂದರೆ
ಕಣ್ಣು ಎಂದು ತಿಳಿದುಕೋ
ಸೃಷ್ಟಿಯ ಮೂಲವೇ ಹೆಣ್ಣು
ಹೆಣ್ಣುವಿಶ್ವದ ಕಣ್ಣು
ಹೆಣ್ಣು ಮನೆಯ ದೀಪ
ಹೆಣ್ಣು ದೈವ ಸ್ವರೂಪ
ಪ್ರಕೃತಿ ಹಸಿರಿಗೆ
ಮಾನವನ ಉಸಿರಿಗೆ
ಕಾರಣಳು ಹೆಣ್ಣು
ಪ್ರೀತಿಸು ಜೀವ
ಭೂಮಿಯ ದೈವ ಹೆಣ್ಣು
ಹೆಣ್ಣು ಜಗದ ಕಣ್ಣು
ತಾಯಿಯ ರೂಪ
ದೈವ ಸ್ವರೂಪ
ಮನೆ ಬೆಳಗುವ ದೀಪ
ಹೆಣ್ಣು,ಹೆಣ್ಣು ಜಗದ ಕಣ್ಣು
ಹೆಣ್ಣೊಂದು ಮನೆಗೆ ಏತಕ್ಕೆ ಬೇಕು
ಕಷ್ಟ ಸುಖದಲ್ಲಿ ನಿಂತು ಎಲ್ಲಾ
ಪಾತ್ರವನ್ನು ವಹಿಸಲು ಹೆಣ್ಣುಬೇಕು
ಮಡದಿಯಾಗಿ ಬರುತ್ತಾಳೆ
ತಾಯಿಯ ರೂಪದಲ್ಲಿ ಕಾಯುತ್ತಾಳೆ
ಅಕ್ಕ ತಂಗಿ ಪ್ರೀತಿಯನ್ನು ಹಂಚುತ್ತಾಳೆ
ಸಹನೆ ತಾಳ್ಮೆಯ ಗುಣದವಳು
ದೈವ ಸ್ವರೂಪದ ಹೆಣ್ಣು ಇವಳು
ಹೆಣ್ಣನ್ನು ಕೈಮುಗಿದು ಪೂಜಿಸು
ನೋಡೋ ದೃಷ್ಟಿ ಬದಲಿಸು
ಹೆಣ್ಣು ಎಂದರೆ ಸೃಷ್ಟಿಯ ಮೂಲ
ಸೃಷ್ಟಿಯ ಮೂಲವ ಕಾಮ ದಿಂದ ಕೆಣಕಿದರೆ
ನಾಶ .......ನಾಶ....... ಸರ್ವನಾಶ.
ಹುಟ್ಟಿನ ಮೂಲವನ್ನು ಕೆಣಕಿ ಉಳಿದವರಿಲ್ಲ.
ಪೂಜಿಸು ಗೌರವಿಸು ಹೆಣ್ಣನ್ನು.
ಈ ಜಗದಲ್ಲಿ ನೀನೆ ಶ್ರೇಷ್ಠನು
ಹೆಣ್ಣನ್ನು ಕೈಮುಗಿದು ಪೂಜಿಸು
ನೋಡೋ ದೃಷ್ಟಿ ಬದಲಿಸು
ಹೆಣ್ಣು ಎಂದರೆ ಸೃಷ್ಟಿಯ ಮೂಲ
ಸೃಷ್ಟಿಯ ಮೂಲವ ಕಾಮ ದಿಂದ ಕೆಣಕಿದರೆ
ನಾಶ .......ನಾಶ....... ಸರ್ವನಾಶ.
ಹುಟ್ಟಿನ ಮೂಲವನ್ನು ಕೆಣಕಿ ಉಳಿದವರಿಲ್ಲ.
ಪೂಜಿಸು ಗೌರವಿಸು ಹೆಣ್ಣನ್ನು.
ಈ ಜಗದಲ್ಲಿ ನೀನೆ ಶ್ರೇಷ್ಠನು
ಕೈಮುಗಿದು ಪೂಜಿಸು
ನೋಡೋ ದೃಷ್ಟಿ ಬದಲಿಸು
ಹೆಣ್ಣು ಅಂದರೆ
ಕಣ್ಣು ಎಂದು ತಿಳಿದುಕೋ
ಸೃಷ್ಟಿಯ ಮೂಲವೇ ಹೆಣ್ಣು
ಹೆಣ್ಣುವಿಶ್ವದ ಕಣ್ಣು
ಹೆಣ್ಣು ಮನೆಯ ದೀಪ
ಹೆಣ್ಣು ದೈವ ಸ್ವರೂಪ
ಹೆಣ್ಣು ದೈವ ಸ್ವರೂಪ
ಸಾಹಿತ್ಯ ರಚನೆ
ಪ್ರಸನ್ನಕುಮಾರ್ ತುಮಕೂರು