ಈ ಪ್ರೀತಿಯು ಶುರುವಾಗಿದೆ
ಕನಸಿನ ದಾರಿಯಲ್ಲೇ
ಈ ಪ್ರೀತಿಯ, ಈ ವಿಷಯವೇ..
ನನಾಗೀಗ ಹೊಸದಾಗಿದೆ.
ಓಹೋ... ಓಹೋ... ಹೋ....ಹೋ....
ಉಸಿರಾಗಿದೆ ಹಸಿರಾಗಿದೆ
ನಿನ್ನ ಹೆಸರೇ ನನ್ನಲ್ಲಿಯೇ
ಮೈಮರೆಸಿದೆ, ಮನಸೋತಿದೆ
ನಿನ್ನ ಸೌಂದರ್ಯಕ್ಕೆ.
ಪ್ರೀತಿನಾ ಆಕರ್ಷಣೆನಾ ಪ್ರೀತಿಸಲು ಭಯವೇನಾ.
ಆಹಾಹಾ...ಆಹಾಹಾ...ಹಾ...ಹಾ...ಹಾ..ಹಾ...
ಈ ಪ್ರೀತಿಯು ಶುರುವಾಗಿದೆ
ಕನಸಿನ ದಾರಿಯಲ್ಲೇ
ಈ ಪ್ರೀತಿಯ, ಈ ವಿಷಯವೇ..
ನನಾಗೀಗ ಹೊಸದಾಗಿದೆ
ಓಹೋ... ಓಹೋ... ಹೋ....ಹೋ....
ನನ್ನ ನಿನ್ನ ಮನಸ್ಸಿನಾ ಮನಸ್ಸಿನಾ
ಆಸೆಯು ಒಂದೇನಾ( ಒಂದೇನಾ)
ಈ ಪ್ರೀತಿಯು ಶುರುವಾದರೆ ಹೀಗೇನಾ
ಜಗವನ್ನು ಮರೆಯೋದು ಸಹಜನಾ
ನಿನ್ನ ಆಗಮನನಾ
ನನ್ನ ಎದೆಯಲ್ಲಿ ಸರಿಗಮನಾ
ತಂಗಾಳಿಯಲ್ಲೂ ಕೇಳಿದ್ದೇನಾ
( ಕಡಲ ಅಲೆಯಲ್ಲಿಯೂ ನಿನ್ನ ಪ್ರತಿಬಿಂಬನಾ)
ನನ್ನ ಹುಣ್ಣಿಮೆ ಚಂದ್ರನೀನೆನಾ
ನೀ ನಕ್ಕರೆ ನಾಚುವುದು ನಕ್ಷತ್ರನಾ
ಉಸಿರಾಗಿದೆ ಹಸಿರಾಗಿದೆ
ನಿನ್ನ ಹೆಸರೇ ನನ್ನಲ್ಲಿಯೇ
ಮೈಮರೆಸಿದೆ, ಮನಸೋತಿದೆ
ನಿನ್ನ ಸೌಂದರ್ಯಕ್ಕೆ.
ನೀನನ್ನನಾ ಪ್ರೀತಿಯು ನೀನೆನಾ
ನಿನ್ನನ್ನ ಪ್ರೀತಿಸಿದ ನಾನೇನೇ ಧನ್ಯನಾ
ನಮ್ಮ ಪ್ರೀತಿಯು ಧರೆಯಲ್ಲಿ ಅಮರನಾ..
ಈ ಪ್ರೀತಿಯು ಶುರುವಾಗಿದೆ
ಕನಸಿನ ದಾರಿಯಲ್ಲೇ
ಈ ಪ್ರೀತಿಯ, ಈ ವಿಷಯವೇ..
ನನಾಗೀಗ ಹೊಸದಾಗಿದೆ.
ಓಹೋ... ಓಹೋ... ಹೋ....ಹೋ....
ಉಸಿರಾಗಿದೆ ಹಸಿರಾಗಿದೆ
ನಿನ್ನ ಹೆಸರೇ ನನ್ನಲ್ಲಿಯೇ
ಮೈಮರೆಸಿದೆ, ಮನಸೋತಿದೆ
ನಿನ್ನ ಸೌಂದರ್ಯಕ್ಕೆ.
ಪ್ರೀತಿನಾ ಆಕರ್ಷಣೆನಾ ಪ್ರೀತಿಸಲು ಭಯವೇನಾ.
ಆಹಾಹಾ...ಆಹಾಹಾ...ಹಾ...ಹಾ...ಹಾ..
ಸಾಹಿತ್ಯ ರಚನೆ
ಪ್ರಸನ್ನಕುಮಾರ್ ತುಮಕೂರು