ಅಮ್ಮ ನೀ ನೋಡಮ್ಮ
ಅಮ್ಮ ಮಾತಾಡಮ್ಮ
ಭಕ್ತರಲ್ಲ ನಿಮಗಾಗಿ ಕಾಯುತ್ತಿದ್ದಾರೆ
ನೀ ಬಾರಮ್ಮ
ಗುಡುಗು
ಮಿಂಚು
ಸಿಡಿಲಿನಂತೆ
ಬಿರುಗಾಳಿ ಬೀಸುವಂತೆ
ವೇಗದಲ್ಲಿ ನೀ ಬಾರಮ್ಮ
ದುಷ್ಟರನ್ನು ಸಂಹರಿಸಲು
ಸಿಸ್ಟರನ್ನು ರಕ್ಷಿಸಲು
ನೀ ಬಾರಮ್ಮ
ಶರವೇಗದಲ್ಲಿ ಶರವೇಗದಲ್ಲಿ
ಭಕ್ತರ ಕಷ್ಟಗಳ ಪರಿಹರಿಸುತ
ದುಷ್ಟಶಕ್ತಿ ರುಂಡಗಳ ತುಂಡರಿಸುತ
ತನ್ನ ಭಕ್ತರನ್ನು ರಕ್ಷಿಸುವ
ತಾಯಿಯೇ ನೀ ಬಾರಮ್ಮ
ಅಮ್ಮ ನೀ ಬಾರಮ್ಮ
ತುಮಕೂರಿನ ಸಾಯಿ ನಗರದಲ್ಲಿ
ನೆಲೆಸಿರುವ ತಾಯಿಯೇ ನೀನು
ಭಕ್ತರನ್ನು ಕಾಯುತ್ತಿರುವ ತ್ರಿಶಕ್ತಿ ನೀನು
ಆ ಮೂರು ಶಕ್ತಿ ನೀವೇ ಅಮ್ಮ
ಶ್ರೀ ಹೊಳೆ ಚೌಡೇಶ್ವರಿ
ಆದಿಶಕ್ತಿ ಮಾರಮ್ಮ
ಸೌದತ್ತಿ ಯಲ್ಲಮ್ಮನೆ
ನೀವೇ ಅಮ್ಮ ನಮಗೆ ಆಧಾರ
ನೀವೇ ಅಮ್ಮ ನಮಗೆ ಪರಿಹಾರ
ಭಕ್ತರ ಕಷ್ಟಗಳ ಪರಿಹರಿಸುತ
ಭಕ್ತರ ಹೃದಯದಲ್ಲಿ
ನೀವು ನೆಲೆಸಿರುವೆ ಅಮ್ಮ
ನಿಮ್ಮ ಶಕ್ತಿಯೇ ಅಪಾರ
ಅಮ್ಮ ನಮ್ಮ ಜೀವನಕ್ಕೆ ನೀವೇ ಆಧಾರ
ಧರ್ಮದ ಹೆಸರಿನಲ್ಲಿರುವ ಧರ್ಮಣ್ಣನ
ಎದೆಯಲ್ಲಿ ನೀ ನೆಲೆಸಿರುವೆ
ಧರ್ಮಣ್ಣನ ಬಾಯಲ್ಲಿ
ವಾಗ್ದಾನದ ರೂಪದಲ್ಲಿ
ಭಕ್ತರ ಕಷ್ಟಗಳ ಪರಿಹರಿಸುತ
ಭಕ್ತರ ಕಾಯುತಿರುವೆ
ಭಕ್ತರ ಮನೆಯಲ್ಲಿಯೇ
ನೀ ನೆಲೆಸಿರುವೆ
ಅಮ್ಮ ..ಅಮ್ಮ...ಅಮ್ಮ... ಅಮ್ಮ
ಗಂಗಾಹನುಮಕ್ಕ
ಧರ್ಮಣ್ಣ ಸಿಂಧು
ಸೃಷ್ಟಿ ಅಮೂಲ್ಯ
ಈ ಕುಟುಂಬದ
ಪೂಜೆ... ಪ್ರೀತಿ.. ಭಕ್ತಿಗೆ... ಹೋಲಿದವಳೆ..
ಭಕ್ತರ ಕಷ್ಟಗಳ ಒಡೆಯಲು ನಿಂತವಳೆ
ತುಮಕೂರಿನ
ಸಾಯಿ ನಗರದಲ್ಲಿ
ನಮ್ಮಮ್ಮ
ಶ್ರೀ ಹೊಳೆ ಚೌಡೇಶ್ವರಿ
ಆದಿಶಕ್ತಿ ಮಾರಮ್ಮ
ಸೌದತ್ತಿ ಎಲ್ಲಮ್ಮ
ಭಕ್ತರಿಗಾಗಿ ನೆಲೆಸವರೆ
ಭಕ್ತರ ಕಷ್ಟ ಪರಿಹರಿಸಲು
ತ್ರಿಶಕ್ತಿಯಾಗಿ ನಿಂತಾವ್ರೆ
ದೆವ್ವದ ಕಾಟವಿರಲಿ
ಯಾವುದೇ ಮಾಟ ಮಂತ್ರ
ಇರಲಿ ಅಮ್ಮ ತುಳಿದು ಕಾಯುತ್ತಾಳೆ
ಅಮ್ಮ ನೀ ನೋಡಮ್ಮ
ಅಮ್ಮ ಮಾತಾಡಮ್ಮ
ಭಕ್ತರಲ್ಲ ನಿಮಗಾಗಿ ಕಾಯುತ್ತಿದ್ದಾರೆ
ನೀ ಬಾರಮ್ಮ
ಗುಡುಗು
ಮಿಂಚು
ಸಿಡಿಲಿನಂತೆ
ಬಿರುಗಾಳಿ ಬೀಸುವಂತೆ
ವೇಗದಲ್ಲಿ ನೀ ಬಾರಮ್ಮ
ನಿನ್ನ ಪರಮ ಭಕ್ತ ನಾನು ಅಮ್ಮ
ನಿನ್ನ ಪಾದಕ್ಕೆ ನನ್ನ ಸಾಹಿತ್ಯ ಸಮರ್ಪಣೆ ಅಮ್ಮ
ಸಾಹಿತ್ಯ ರಚನೆ
ಪ್ರಸನ್ನ ಕುಮಾರ್,
ತುಮಕೂರು