ನವೀಲು ಕಂಡಂತೆ ನೀ ನನಗೆ ಕಂಡರೇ
ಯಾವಾಗ ಕಾಣುವೆ ನನ್ನ ಮುಂದೆ ನೋಡಿ ತೃಪ್ತಿಯಾಗುವೇ
ನಿನ್ನ ನೋಡಲೆಂದು ನಾ ರಸ್ತೆ ಬದಿಯಲ್ಲಿ ಕಾಯುವೇ
ಚಂದ್ರನಂತೆ ಹೊಳಪು ನಿನಾ ಈ ಮುಖವೇ
ಗಾಳಿಯಲ್ಲಿ ನಿನ್ನ ಕೇಶರಾಶಿಗಳು ಹಾರುತ ತೂಗಿವೇ
ಬರುವೆಯಾ ಈ ನನ್ನ ಮನದಾ ಗೆಳತಿಯೇ
ಕಣ್ಣು ಮುಚ್ಚಿದರೆ ಕಣ್ಣು ಮುಂದೆ ಕಾಣುವೇ
ಯಾಕೆ ನೀ ಹೀಗೆ ನನ್ನ ಕಾಡುತ್ತಿರುವೆಯೇ
ನನ್ನ ನೋಡಿ ನೀನೇ ಯಾಕೆ ನಾಚುತ್ತಿರುವೆಯೇ
ಹೇಳುವೆಯಾ ನನ್ನ ಹೃದಯ ಕಂಡವಳೆಯೇ
ನಿಂತುಕೋ ಬರುವೆ ನಾನು ನಿನ್ನ ಸನಿಹವೇ
ನಿನ್ನ ಜೊತೆ ಮಾತನಾಡುವ ಆತುರ ಕಾದಿದೇ
ನಾನು ಇನ್ನೂ ಏನೆಂದು ಹೇಳಲಿ ಈ ನನ್ನ ಮನವೇ
ಅವಳು ಒಪ್ಪಿದರೆ ನಾನು ಹೇಗೆ ತಾಳಲಿ ಸಂತೋಷವೇ