ಈ ಪ್ರೀತಿಯ ಕಾಯಿಲೆಗೆ ಕಾರಣ ನನ್ನ ಪ್ರೇಯಸಿಯೇನೋ
ಅವಳ ಕಂಡ ಕ್ಷಣವೇ ಹೃದಯಕ್ಕೆ ಪ್ರೀತಿಯ ಸ್ಪರ್ಶವಾಯಿತೇನೋ
ಈ ಪ್ರೀತಿಯ ಕಾಯಿಲೆಗೆ ಕಾರಣ ನನ್ನ ಪ್ರೇಯಸಿಯೇನೋ
ಈ ಏಕಾಂಗಿಯ ಹೃದಯ ಪ್ರೇಮದ ಲೋಕದಿ ಬಂಧಿಯಾಯಿತೇನೋ
ಕ್ಷಣ ಕ್ಷಣವು ನಿನ್ನ ನೋಡುವ ಹಂಬಲ ಈ ಕಣ್ಣಗಳಿಗೆ ಹೆಚ್ಚಾಯಿತೇನೋ..
ಈ ಪ್ರೀತಿಯ ಕಾಯಿಲೆಗೆ ಕಾರಣ ನನ್ನ ಪ್ರೇಯಸಿಯೇನೋ
ಅವಳ ಕಂಡ ಕ್ಷಣವೇ ಈ ಹೃದಯಕ್ಕೆ ಪ್ರೀತಿಯ ಸ್ಪರ್ಶವಾಯಿತೇನೋ
ಆ ಕಣ್ಣಗಳ ನೋಟಕ್ಕೆ,ಮೈ ಮಾಟಕ್ಕೆ ಪ್ರೀತಿಯ ಅನುಭವವಾಯಿತೇನೋ
ಕ್ಷಣ ಕ್ಷಣವೂ ನಿನ್ನ ನೋಡುವ ಹಂಬಲ ಎದೆಯಲ್ಲಿ ಜೋರಾಯಿತೇನೋ
ನಾ ಪ್ರೀತಿಯಲ್ಲಿ ಬಿದ್ದ ಸಮಯವೇ ಈ ಕಾಯಿಲೆಗೆ ರೂಪ ಬಂತೇನೋ
ಈ ಪ್ರೀತಿಯ ಕಾಯಿಲೆಗೆ ಔಷಧಿ ನೀನು ಮಾತ್ರವೇನೋ..
ಈ ಪ್ರೀತಿಯ ಕಾಯಿಲೆಗೆ ಕಾರಣ ನನ್ನ ಪ್ರೇಯಸಿಯೇನೋ
ಅವಳ ಕಂಡ ಕ್ಷಣವೇ ಹೃದಯಕ್ಕೆ ಪ್ರೀತಿಯ ಸ್ಪರ್ಶವಾಯಿತೇನೋ