ನನ್ನಾಕಿ ನನ್ನಾಕಿ ಹಳ್ಳಿ ಹುಡುಗಿ ನನ್ನಾಕಿ
ರೂಪದಾಗ ಗುಣದಾಗ ನನಗ ಬಾಳ ಹಿಡಿಸಿದಕಿ
ಒಂದ ಮಾತಿನ್ಯಾಗ್ ಹೊಗಳಿದರ ಸಿಗದಕಿ ರೂಪಸಿ
ಈ ಸಾವಕಾರತಿ... (೨)
(ಚ)...ಬಾಳ ಚಂದ ನನ್ ಗೆಳತಿ ನನ್ನ ದೃಷ್ಟಿ ತಾಕ್ಯೆತಿ
ಬಂಗಾರದಂತ ಗುಣದ ಗೊಂಬಿ ನನಗ ಸಿಕ್ಕೆತಿ
ಚಂದಲೇ ಎಷ್ಟು ಚಂದಲೇ ಇಕಿಯ ನಗುವ ನನ್ನ ತೆಲಿಯ ಕೆಡಿಸೆತಿ ಮುದ್ದು ಮಾತ ನನ್ನ ಮನಸ ಕೆಡಿಸೆತಿ
ಹೆಂಗೋ ಏನೋ ಸಿಕ್ಕಾಳೋ ಲೋಹಿತ ಮಾವ ಅಂದಾಳೋ
ನನ್ನ ನಿದ್ದಿ ಕೆಡಿಸ್ಯಾಳೋ ಪೂರಾ ಮಳ್ಳ ಮಾಡ್ಯಾಳೋ
ಕೇಳಲೇ ದೋಸ್ತ್ ಕೇಳಲೇ ಇಕಿ ಧ್ವನಿ ಇದ್ದಂಗ ಕೋಗಿಲೆ
(ಚ)...ಹೇಳೋ ದೋಸ್ತ್ ಒಂದ್ ಮಾತ ಸಿಗ್ತಾಳೆನೋ ನನಗಿಕಿ ಸಿಕ್ಕರ ನೋಡೋ ಗೆಳೆಯ ಬಂದಂಗ ನಂಗ ರೆಕ್ಕಿ ಚಿನ್ನದ ಚಿಟಗುಬ್ಬಿ ಮಾಡ್ಯಾಳೋ ನಂಗ ಮೋಡಿ ಓಡಿ ಹೋಗ್ತಾಳೋ ಸನ್ನೆ ಮಾಡಿ ಚಂದಲೇ ಎಷ್ಟು ಚಂದಲೇ ಇಕಿಯ ನಗುವ ನನ್ನ ತಲಿಯ ಕೆಡಿಸೆತಿ ಮುದ್ದು ಮಾತ ನನ್ನ ಮನಸ ಕೆಡಿಸೆತಿ
ಬಾರೋ ಗೆಳೆಯ ಹೆಣ್ಣ ಕೇಳಾಕ ಹೋಗೋಣ ಒಪ್ಪದಿದ್ರ ನೋಡೋಣ ಕಿಡ್ನಾಪರೇ ಮಾಡೋಣ ಹೆಂಗಾರೆ ನನಗ ಬೇಕಲೇ ಇಲ್ಲಂದ್ರ ಬದುಕುದಿಲ್ಲಲೇ
(ಮುಕ್ತಾಯ)...ಕೇಳೋ ಗೆಳೆಯ ಈಗ ನಾನು ಪ್ರೀತ್ಯಾಗ ಬಿದ್ದೇನ ಪ್ರೀತಿಸಿದಕಿ ಸಿಕ್ಕರಂತೂ ನನ್ನ ಜನ್ಮ ಪಾವನ ಹೆಂಗಾರೆ ಮಾಡಿ ಪಡೆದೆ ಪಡೀತೇನ ನೋಡ್ತಿ ಏನ ಚಾಲೆಂಜ್ ಮಾಡ್ತಿ ಏನ...???