ಮಲೆನಾಡಲ್ಲಿ ಬರಗಾಲದ ಈ ಸಮಯ
ಮರುಭೂಮಿಯಲ್ಲಿ ಮಳೆಗಾಲದ ವಿಷಯ
ಬರಬೇಕು ಬರಬೇಕು ನೀ ಇಲ್ಲಿಗೆ
ನಗಬೇಕು ನಗಬೇಕು ಹೂ ಮೆಲ್ಲಗೆ
ಭೂಮಿ ಬೆಳಕು ನೀ ನಕ್ಕರೆ
ಬದುಕೆಲ್ಲ ಬೆಳಕು ನೀ ಸಿಕ್ಕರೆ
ಕಾಣದೇನು ನಿನಗೆ ನನ್ನ ಒಲವು
ಕೇಳದೇನು ಪಿಸುಗುಟ್ಟುವ ಮನವು
ನಿಂತಾಯ್ತು ಜಗವೆಲ್ಲ ನೀನಿಲ್ಲದೆ
ನಿಶ್ಯಬ್ದ ಮನಸಿಗ ನೀ ಬಾರದೆ
ಜೊತೆಯಾಗು ಜೊತೆಯಾಗು ಇನ್ನೊಮ್ಮೆ ಹಾಗೆ
ಬಳಿಬಂದು ತುಸು ನಾಚು ಮತೊಮ್ಮೆ ಹೀಗೆ
ದಯಮಾಡಿ ಒಂದು ಅವಕಾಶ ನೀಡು
ಮನದ ಒಳಗೆ ಇಳಿದು ನೋಡು
ನಿನಗಾಗಿ ಕಾಯುವೆ ಕೊನೆವರೆಗೂ
ಇಲ್ಲೇ ಇರುವೆ nee ಬರೋವರೆಗೂ