[Female Vocal]
ಗಜವದನ ಬೇಡುವೆ | ಗೌರೀತನಯ ಗಜವದನ ಬೇಡುವೆ ತ್ರಿಜಗವಂದಿತನೆ ಸುಜನರ ಪೊರೆವನೆ ॥ಪ॥
ಪಾಶಾಂಕುಶಧರ ಪರಮಪವಿತ್ರ ಮೂಷಿಕವಾಹನ ಮುನಿಜನಪ್ರೇಮ ||೧||
ಮೋದದಿ ನಿನ್ನಯ ಪಾದವ ತೋರೋ ಸಾಧುವಂದಿತನೆ ಆದರದಿಂದಲಿ ||೨||
ಸರಸಿಜನಾಭ ಶ್ರೀ ಪುರಂದರವಿಠಲನ ನಿರುತ ನೆನೆಯುವಂತೆ ದಯ ಮಾಡೋ ||೩||
ಗಜವದನ ಬೇಡುವೆ
ಗಜವದನ ಬೇಡುವೆ | ಗೌರಿತನಯ ಗಜವದನ ಬೇಡುವೆ ತ್ರಿಜಗವಂದಿತನೆ ಸುಜನರ ಪೊರೆವನೆ ॥ಪ॥